ಗುರುವಾರ, ಮೇ 21, 2009

ಕನಸು ಟ್ರಸ್ಟ್ ಕುರಿತು ಜಸ್ಟ್ ಒಂದಿಷ್ಟು ಪರಿಚಯ ಅಷ್ಟೇ?

'ನನಗಾಗಿ' - ಈ ಬ್ಲಾಗ್ ಕ್ರಿಯೇಟ್ ಮಾಡಿದ್ದೀನಿ, ಆದರೆ ಏನು ಬರೀ ಬೇಕು, ಯಾಕೆ ಬರೀಬೇಕು, ಅನ್ನೋದೆಲ್ಲ ಅಷ್ಟೊಂದು ತಲೆ ಕೆಡಿಸ್ಕೊಂಡಿಲ್ಲ. ಆದ್ರೆ ಈಗ ಹೀಗೆ ಟೈಪ್ ಮಾಡ್ತಾ ಇದ್ರೆ ನನಗೇ ಗೊತ್ತಾಗ್ತಿದೆ, ನಾನು ಏನಾದ್ರೂ ಬರ್‍ಕೋ ಬಹುದು. ಬೇರೆಯವರು ಓದೋದಾದ್ರೆ ಓದ್ತಾರೆ. ಓದಿ ಇಷ್ಟವಾದ್ರೆ ಖುಷಿಪಡ್ತಾರೆ, ಇಲ್ಲಾಂದ್ರೆ ನೋಡಿ ಯೂಸ್ಲೆಸ್ ಅಂತಾ ಬಿಡ್ತಾರೆ. ಆದ್ರೆ ಇದೆಲ್ಲಾ ಕಲ್ತಿದ್ದು ಯಾರಿಂದಾ ಗೊತ್ತಾ, ಬೆಂಗಳೂರಿನ ನನ್ನ ಸ್ನೇಹಿತೆ ವೀಣಾಳಿಂದ. ಅವಳೊಬ್ಬ ಜರ್ನಲಿಸ್ಟ್ ಕಮ್ ಸೊಷಿಯಲ್ ವರ್ಕರ್‍ರು ವೆರಿ ಡೈನಾಮಿಕ್ಕು, ಆಕ್ಟಿವ್ವು, ಕಮಿಟೆಡ್ಡು. ಅವಳೊಂದು 'ಕನಸು ಟ್ರಸ್ಟ್' ಅಂತಾ ಮಾಡಿದ್ದಾಳೆ, ಅವಳ ಈ ಟ್ರಸ್ಟ್, ಕೊಳ್ಳೇಗಾಲ ಮತ್ತು ಚಾಮರಾಜನಗರದ ಸುತ್ತಮುತ್ತಲ ಕುಗ್ರಾಮಗಳಲ್ಲಿ ಹುಟ್ಟಿ ಬೆಳವಣಿಗೆ/ಅಭಿವೃದ್ಧಿಗಾಗಿ ಹಂಬಲಿಸುವ ಶಾಲೆ ಕಲಿಯುವ ಆಕಾಂಕ್ಷೆಯಿರುವ ಬಡ ಹೆಣ್ಣು ಮತ್ತು ಗಂಡು ಮಕ್ಕಳನ್ನು ಬೆಂಗಳೂರನಂತಹ ಊರುಗಳಿಗೆ ತಂದು, ಸ್ಕೂಲು/ಕಾಲೇಜು/ಹಾಸ್ಟೆಲ್ ಸೇರಿ ವಿದ್ಯಾಭ್ಯಾಸ ಮುಂದುವರೆಸಲು, ಅವರಿಗೆಲ್ಲ ಪಾರ್ಟ್‌ಟೈಂ ಕೆಲಸಗಳನ್ನು ಸ್ನೇಹಿತರ ಸಹಾಯದಿಂದ ಕೊಡಿಸಿದ್ದಾಳೆ. ತನ್ನ ಸ್ನೇಹಿತರಿಂದ ಟ್ರಸ್ಟಿಗೆ ದೇಣಿಗೆ ಪಡೆದು, ರಜಾದಿನಗಳಲ್ಲಿ ಹಾಸ್ಟೆಲ್ ನಲ್ಲಿ ಇರಲಾಗದ ಮಕ್ಕಳಿಗೆ, ಹಾಸ್ಟೆಲ್ ಇಲ್ಲದೇ ಕೆಲಸವಿಲ್ಲದೇ, ಊಟ/ಬಟ್ಟೆ ಇಲ್ಲದೇ ಇರುವ ಮಕ್ಕಳಿಗೆ, ಫೀಸು ಕಟ್ಟಲಾಗದ ಮಕ್ಕಳಿಗೆ ಸಹಾಯ ಮಾಡ್ತಾಳೆ. ಅವಳಿಗೆ ಇದನ್ನು ಒಂದು ಸೋಕಾಲ್ಡ್ ಎನ್.ಜಿ.ಓ ತರಹ ಮುಂದುವರೆಸುವ ಇಚ್ಚೆ ಇಲ್ಲ. ಈ ಟ್ರಸ್ಟ್ ನ್ನು ಡೊನೇಷನ್ ಪಡೆದು ತನ್ನ ಹೊಟ್ಟೆ ಪಾಡಿಗಾಗಿ ಅವಳು ಮಾಡಿಲ್ಲ, ಏನೋ ತನ್ನ ಕೈಯಲ್ಲಿ ಆದಷ್ಟು ಬಡ ಮಕ್ಕಳಿಗೆ ಸಹಾಯ ಮಾಡುವ ಮತ್ತು ತನ್ನ ಸ್ನೇಹಿತರಿಂದಲೂ ಮಾಡಿಸುವ ಪ್ರಾಮಾಣಿಕ ಉದ್ಧೇಶದಿಂದ ಮಾಡಿದ್ದಾಳೆ. ಸಹಾಯ ಮಾಡುವ ಇಚ್ಚೆ ಇರುವವರು ದಯವಿಟ್ಟು 'ಕನಸುಟ್ರಸ್ಟ್.ಬ್ಲಾಗ್ಸ್ಪಾಟ್.ಕಾಂ = www.kanasutrust.blospot.com' ಗೆ ಒಮ್ಮೆ ವಿಸಿಟ್ ಮಾಡಿನೋಡಿ.
ಆಲ್ ದಿ ಬೆಸ್ಟ್