ಗುರುವಾರ, ನವೆಂಬರ್ 15, 2012

ಸ್ವಘೋಷಿತ ಧರ್ಮ ರಕ್ಷಕರು, ನೈತಿಕ ಆರಕ್ಷಕರು...

ಧರ್ಮ ಎನ್ನುವುದು 'ಜೀವನ ವಿಧಾನ', ಅದು ತೀರ ವಯಕ್ತಿಕವಲ್ಲವೇ?. ಆದರೆ ತಮ್ಮ ಲೋಪಗಳನ್ನು ಮುಚ್ಚಿಕೊಳ್ಳಲು ಕೆಲವರು ಅದನ್ನೊಂದು ಬ್ಯ್ರಾಂಡ್ ಮಾಡಿದರು. ಅದನ್ನು ಸ್ವಂತಿಕೆ ಇಲ್ಲದ, ಗುರುತಿನ ಗೊಂದಲವಿರುವ, ಕೀಳರಿಮೆಯ ಜನರು ಮಡಿವಂತಿಕೆಯ ಮುಖವಾಡದಲ್ಲಿ ಮೂಢತೆಯಿಂದ ಪಾಲಿಸಿದರು. ಇನ್ನು ಕೆಲವರು ಆ ಬ್ಯ್ರಾಂಡಿನ ಅಡಿಯಲ್ಲಿ ರಾಜಕೀಯ ಮಾಡಿಕೊಂಡು ಹೊಟ್ಟೆ ಪಾಡು ಮಾಡುತ್ತಿದ್ದಾರೆ. ಆಶ್ಚರ್ಯವೆಂದರೆ, ಈ ಸ್ವಯಂಘೋಷಿತ ಧರ್ಮ ರಕ್ಷಕರಿಗೆ,  ಮಾನವೀಯ ಮೌಲ್ಯಗಳ, ಮಾನವೀಯ ಸಂಬಂಧಗಳ ಮತ್ತು ಸ್ವಾಭಾವಿಕ ಸತ್ಯಗಳ ಬಗ್ಗೆ ಆಸಕ್ತಿಯೇ ಇಲ್ಲ. ತಾವಂದುಕೊಂಡಿರುವ ಧರ್ಮಕ್ಕೂ, ಮಾತಿಗೂ, ತಮ್ಮ ಕೃತಿಗೂ  ತಾಳೆಯೇ ಇಲ್ಲವೆನ್ನುವುದು ಗೊತ್ತಿದ್ದರೂ ಇವರದ್ದು ವಿತಂಡವಾದ.  ಇವರು ಧರ್ಮವನ್ನು ಕೇವಲ, ಹೆಣ್ಣುಗಂಡಿನ ಸಂಬಂಧಕ್ಕೇ ಹೆಚ್ಚು ತಗುಲಿಸಿಕೊಂಡಿರುವುದು ಯಾಕೆ? ಕತ್ತಲಲ್ಲಿ, ತೆರೆಮರೆಯಲ್ಲಿ, ಹಣ ಮತ್ತು ಅಧಿಕಾರದ ಮದದಲ್ಲಿ, ಯಾವುದೇ ಮುಜುಗರವಿಲ್ಲದೇ ನಡೆಯುವ ಚಟುವಟಿಕೆಗಳು, ಒಪ್ಪಿ, ಮುಕ್ತವಾಗಿ, ಭಾವನಾತ್ಮಕವಾಗಿ ಮಾನವ ಸಹಜ ಪ್ರೇಮದಿಂದ ನಡೆಯಲು ಮಾತ್ರ 'ಇವರ ಧರ್ಮ' ಅಡ್ಡಿಯಾಗುವುದು ಯಾಕೆ? ಇವರ ಧರ್ಮ ಕೇವಲ ಲೈಂಗಿಕತೆಗೆ, ಹೆಣ್ಣಿಗೆ ಮತ್ತು ಅವಳ ದೇಹಕ್ಕೆ, ಉಡುಪಿಗೆ, ಅವಳ ಸ್ವಾತಂತ್ಯ್ರಕ್ಕೆ ಮಾತ್ರ ತಗುಲಿಕೊಂಡಿದೆ. ಕೊಲೆ, ಸುಲಿಗೆ, ಮೋಸ, ಲಂಚ, ಹಸಿವು, ಅಸಮಾನತೆ, ನಿಕ್ಷರತೆ,  ನಿರುದ್ಯೋಗ, ವರದಕ್ಷಿಣೆ, ಮಾನಭಂಗ, ದೇವದಾಸಿ ಪದ್ಧತೆ, ಜಾತಿ ಪದ್ಧತಿ, ಹೆಣ್ಣು ಭ್ರೂಣ ಹತ್ಯೆ, ಅಸಹಾಯಕರ ಶೋಷಣೆ, ಅಧಿಕಾರ ದುರ್ಬಳಕೆ, ಕರ್ತವ್ಯ ಮರೆತ ರಾಜಕಾರಣಿಗಳು, ಅಪ್ಪ ಅಮ್ಮನನ್ನು ನೋಡಿಕೊಳ್ಳದೆ ಹೊರಗಟ್ಟುವ ಮಕ್ಕಳು, ...  ಇವಕ್ಕೆ ಇವರ ಧರ್ಮದಲ್ಲಿ ಜಾಗವಿಲ್ಲವೇ? ಹಾದರೆ ಇವರು ಎಂತಹ ಜನರಿರಬೇಕು ?

ಮಂಗಳವಾರ, ಸೆಪ್ಟೆಂಬರ್ 18, 2012

  Mandagadde-Shimoga district, Karnataka, India. On 31st Dec-11...