Nanagaagi
ಮಂಗಳವಾರ, ಏಪ್ರಿಲ್ 30, 2013
ಗುರುವಾರ, ನವೆಂಬರ್ 15, 2012
ಸ್ವಘೋಷಿತ ಧರ್ಮ ರಕ್ಷಕರು, ನೈತಿಕ ಆರಕ್ಷಕರು...
ಧರ್ಮ ಎನ್ನುವುದು 'ಜೀವನ ವಿಧಾನ', ಅದು ತೀರ ವಯಕ್ತಿಕವಲ್ಲವೇ?. ಆದರೆ ತಮ್ಮ ಲೋಪಗಳನ್ನು ಮುಚ್ಚಿಕೊಳ್ಳಲು ಕೆಲವರು ಅದನ್ನೊಂದು ಬ್ಯ್ರಾಂಡ್ ಮಾಡಿದರು. ಅದನ್ನು ಸ್ವಂತಿಕೆ ಇಲ್ಲದ, ಗುರುತಿನ ಗೊಂದಲವಿರುವ, ಕೀಳರಿಮೆಯ ಜನರು ಮಡಿವಂತಿಕೆಯ ಮುಖವಾಡದಲ್ಲಿ ಮೂಢತೆಯಿಂದ ಪಾಲಿಸಿದರು. ಇನ್ನು ಕೆಲವರು ಆ ಬ್ಯ್ರಾಂಡಿನ ಅಡಿಯಲ್ಲಿ ರಾಜಕೀಯ ಮಾಡಿಕೊಂಡು ಹೊಟ್ಟೆ ಪಾಡು ಮಾಡುತ್ತಿದ್ದಾರೆ. ಆಶ್ಚರ್ಯವೆಂದರೆ, ಈ ಸ್ವಯಂಘೋಷಿತ ಧರ್ಮ ರಕ್ಷಕರಿಗೆ, ಮಾನವೀಯ ಮೌಲ್ಯಗಳ, ಮಾನವೀಯ ಸಂಬಂಧಗಳ ಮತ್ತು ಸ್ವಾಭಾವಿಕ ಸತ್ಯಗಳ ಬಗ್ಗೆ ಆಸಕ್ತಿಯೇ ಇಲ್ಲ. ತಾವಂದುಕೊಂಡಿರುವ ಧರ್ಮಕ್ಕೂ, ಮಾತಿಗೂ, ತಮ್ಮ ಕೃತಿಗೂ ತಾಳೆಯೇ ಇಲ್ಲವೆನ್ನುವುದು ಗೊತ್ತಿದ್ದರೂ ಇವರದ್ದು ವಿತಂಡವಾದ. ಇವರು ಧರ್ಮವನ್ನು ಕೇವಲ, ಹೆಣ್ಣುಗಂಡಿನ ಸಂಬಂಧಕ್ಕೇ ಹೆಚ್ಚು ತಗುಲಿಸಿಕೊಂಡಿರುವುದು ಯಾಕೆ? ಕತ್ತಲಲ್ಲಿ, ತೆರೆಮರೆಯಲ್ಲಿ, ಹಣ ಮತ್ತು ಅಧಿಕಾರದ ಮದದಲ್ಲಿ, ಯಾವುದೇ ಮುಜುಗರವಿಲ್ಲದೇ ನಡೆಯುವ ಚಟುವಟಿಕೆಗಳು, ಒಪ್ಪಿ, ಮುಕ್ತವಾಗಿ, ಭಾವನಾತ್ಮಕವಾಗಿ ಮಾನವ ಸಹಜ ಪ್ರೇಮದಿಂದ ನಡೆಯಲು ಮಾತ್ರ 'ಇವರ ಧರ್ಮ' ಅಡ್ಡಿಯಾಗುವುದು ಯಾಕೆ? ಇವರ ಧರ್ಮ ಕೇವಲ ಲೈಂಗಿಕತೆಗೆ, ಹೆಣ್ಣಿಗೆ ಮತ್ತು ಅವಳ ದೇಹಕ್ಕೆ, ಉಡುಪಿಗೆ, ಅವಳ ಸ್ವಾತಂತ್ಯ್ರಕ್ಕೆ ಮಾತ್ರ ತಗುಲಿಕೊಂಡಿದೆ. ಕೊಲೆ, ಸುಲಿಗೆ, ಮೋಸ, ಲಂಚ, ಹಸಿವು, ಅಸಮಾನತೆ, ನಿಕ್ಷರತೆ, ನಿರುದ್ಯೋಗ, ವರದಕ್ಷಿಣೆ, ಮಾನಭಂಗ, ದೇವದಾಸಿ ಪದ್ಧತೆ, ಜಾತಿ ಪದ್ಧತಿ, ಹೆಣ್ಣು ಭ್ರೂಣ ಹತ್ಯೆ, ಅಸಹಾಯಕರ ಶೋಷಣೆ, ಅಧಿಕಾರ ದುರ್ಬಳಕೆ, ಕರ್ತವ್ಯ ಮರೆತ ರಾಜಕಾರಣಿಗಳು, ಅಪ್ಪ ಅಮ್ಮನನ್ನು ನೋಡಿಕೊಳ್ಳದೆ ಹೊರಗಟ್ಟುವ ಮಕ್ಕಳು, ... ಇವಕ್ಕೆ ಇವರ ಧರ್ಮದಲ್ಲಿ ಜಾಗವಿಲ್ಲವೇ? ಹಾದರೆ ಇವರು ಎಂತಹ ಜನರಿರಬೇಕು ?
ಸೋಮವಾರ, ಮೇ 30, 2011
ದ್ವಂದ್ವ ಧೋರಣೆಯ ಇಬ್ಬಂದಿ ಅಧಿಕಾರಿಗಳು ಮತ್ತು ಪಾಲಿಸಿಗಳು
ನಮ್ಮ ರಾಜ್ಯದಲ್ಲಿ ಸುಮಾರು ೨೪ ಸಾವಿರ ಜನ ದೇವದಾಸಿ ಮಹಿಳೆಯರಿದ್ದಾರೆ, ಸುಮಾರು ೭೦ ಸಾವಿರ ಜನ ಮಹಿಳೆಯರು ಲೈಂಗಿಕ ಕಾರ್ಮಿಕರಾಗಿ ಅತ್ತ ಅಲ್ಲಿಯೇ ಮುಂದುವರೆಯಲಾರದೇ, ಇತ್ತ ಹಿಂದಿರುಗಿ ಬರಲಾಗದೇ, ಇಲ್ಲಿಯೇ ಇರಲೂ ಆಗದೇ ನರಳಿ ಬದುಕುತ್ತಿದ್ದಾರೆ. ಸುಮಾರು ೩೪ ಸಾವಿರ ಪುರುಷ ಸಲಿಂಗಕಾಮಿಗಳಿದ್ಧಾರೆ. ಇವರೆಲ್ಲರೂ ಇಂದು ತಮ್ಮನ್ನು ಎಚ್‌ಐವಿಯಿಂದ ರಕ್ಷಿಸಿಕೊಳ್ಳುವುದಲ್ಲದೇ ಇವರ ಲೈಂಗಿಕ ಸಂಗಾತಿಗಳನ್ನೂ ಸುರಕ್ಷಿತ ಲೈಂಗಿಕತೆಗೆ ಪ್ರೋತ್ಸಾಹಿಸಿ ಸಮಾಜದಲ್ಲಿ ಎಚೈವಿ ತಡೆಗಟ್ಟುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದಾರೆ
ಕರ್ನಾಟಕದಲ್ಲಿ, ಸಮಗ್ರ ಆಪ್ತಸಮಾಲೊಚನೆ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಸ್ವಪ್ರೇರಣೆಯಿಂದ ರಕ್ತ ಪರೀಕ್ಷೆ ಮಾಡಿಸಿಕೊಂಡವರಲ್ಲಿ ಸುಮಾರು ಇದುವರೆಗೆ ಒಟ್ಟು ೧.೫ ಲಕ್ಷ ಜನ ಎಚ್‌ಐವಿ ಪಾಸಿಟಿವ್ ಆಗಿದ್ದಾರೆ ಅವರಲ್ಲಿ ೭೦ ಸಾವಿರ ಜನ ಮಹಿಳೆಯರು ಸೇರಿದ್ದಾರೆ. ರಾಜ್ಯ ಸರ್ಕಾರದ ಅಂಕಿಸಂಖ್ಯೆಯ ಪ್ರಕಾರ ಆರು ವರ್ಷದ ಹಿಂದೆ ಶೇ೧.೫ ರಷ್ಟಿದ್ದ ಎಚ್‌ಐವಿ ಸೋಂಕಿನ ಪ್ರಮಾಣ ಇಂದು ೦.೩೮ ಕ್ಕೆ ಇಳಿದಿದೆ.
ರಾಷ್ಟ್ರ (ನ್ಯಾಕೋ - ನ್ಯಾಷನಲ್ ಏಡ್ಸ್ ನಿಯಂತ್ರಣ ಸಂಸ್ಥೆ ) ಹಾಗೂ ರಾಜ್ಯ ಸರ್ಕಾರ (ಕೆಸಾಪ್ಸ್- ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ) ಎಚ್‌ಐವಿ ನಿಯಂತ್ರಣ ಕಾರ್ಯಕ್ರಮವನ್ನು ಲೈಂಗಿಕ ವೃತ್ತಿನಿರತ ಮಹಿಳೆಯರು ಮತ್ತು ಪರುಷ ಸಲಿಂಗಕಾಮಿ ಗಂಡಸರ ಸಮುದಾಯಗಳನ್ನು ಗುರುತಿಸಿ ಅವರ ಸಂಘಟನೆಗಳ ಎಚ್‌ಐವಿ ತಡಗಟ್ಟುವ ಕಾರ್ಯಕ್ರಮವನ್ನು ಮುಂದುವರೆಸಲು ಪ್ರಯತ್ನಿಸುತ್ತಿದ್ದರೂ, ಇದಕ್ಕೆ ಪೂರಕವಾಗಿರ ಬೇಕಾದ ಪಾಲಿಸಿಗಳು/ನಿಯಮಗಳು ಸಮರ್ಪಕವಾಗಿಲ್ಲ.
ಈಗ ಎನ್‌ಎಸಿಪಿ -೩ ಮುಗಿಯುತ್ತದೆ ಮುಂದಿನ ವರ್ಷದಿಂದ ಎನ್‌ಎಸಿಪಿ-೪ ಮುಂದುವರೆಯುತ್ತದೆ. ಇದಕ್ಕೆ ಬೇಕಾದ ಸಲಹೆಗಳನ್ನು ನ್ಯಾಕೋ ಹಾಗೂ ಕೆಸಾಪ್ಸ್ ಎರಡೂ ಸಂಸ್ಥೆಗಳು ತಳಮಟ್ಟದ ಅನುಭವಿ ಸಮುದಾಯ ಸಂಘಟನೆಗಳು ಹಾಗೂ ವ್ಯಕ್ತಿಗಳಿಂದ ಪಡೆದುಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸ ಬೇಕಿದೆ. ಕನಿಷ್ಠ ಒಂದಾದರೂ ಸಮಾಲೋಚನಾ ಸಭೆಯನ್ನು ರಾಜ್ಯ ಮಟ್ಟದಲ್ಲಿ ಏರ್ಪಡಿಸಲು ಪ್ರಯತ್ನಿಸಬೇಕಿದೆ. ಇದಕ್ಕೆ ನಾವೆಲ್ಲರೂ ಒತ್ತಡ ಹೇರಬೇಕಿದೆ.

ಕಾರ್ಯಕ್ರಮದ ಸುಸ್ಥಿರತೆಯು ಸಮುದಾಯದ ಸಶಕ್ತತೆಯಿಂದಲೇ ಸಾಧ್ಯ ಎನ್ನುವ ಸತ್ಯ ಗೊತ್ತಿದ್ದರೂ ಸಹ ಇಬ್ಬಂದಿ ಅಧಿಕಾರಿವರ್ಗದ ಕೆಸಾಪ್ಸ್ ನಂತಹ ಸಂಸ್ಥೆಗಳು, ಸಮುದಾಯ ಸಂಘಟನೆಗಳನ್ನು ಭಿಕ್ಷುಕರಂತೆ ಕಾಣುತ್ತಾ, ಒಡೆದು ಆಳುವ ನೀತಿಯನ್ನು ಸಮುದಾಯ ಸಂಸ್ಥಗಳಮೇಲೆ ಹೇರುತ್ತಾ, ಕೇವಲ ಅಂಕಿಸಂಖ್ಯೆಗಳ ಮೇಲೆ ಕಣ್ಣಿಟ್ಟು ಕೂತಿದೆ.
ಈಗ ಎನ್‌ಎಸಿಪಿ -೩ ಮುಗಿಯುತ್ತದೆ ಮುಂದಿನ ವರ್ಷದಿಂದ ಎನ್‌ಎಸಿಪಿ-೪ ಮುಂದುವರೆಯುತ್ತದೆ. ಇದಕ್ಕೆ ಬೇಕಾದ ಸಲಹೆಗಳನ್ನು ನ್ಯಾಕೋ ಹಾಗೂ ಕೆಸಾಪ್ಸ್ ಎರಡೂ ಸಂಸ್ಥೆಗಳು ತಳಮಟ್ಟದ ಅನುಭವಿ ಸಮುದಾಯ ಸಂಘಟನೆಗಳು ಹಾಗೂ ವ್ಯಕ್ತಿಗಳಿಂದ ಪಡೆದುಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸ ಬೇಕಿದೆ. ಕನಿಷ್ಠ ಒಂದಾದರೂ ಸಮಾಲೋಚನಾ ಸಭೆಯನ್ನು ರಾಜ್ಯ ಮಟ್ಟದಲ್ಲಿ ಏರ್ಪಡಿಸಲು ಪ್ರಯತ್ನಿಸಬೇಕಿದೆ. ಇದಕ್ಕೆ ನಾವೆಲ್ಲರೂ ಒತ್ತಡ ಹೇರಬೇಕಿದೆ.
ಶುಕ್ರವಾರ, ಜೂನ್ 5, 2009
ಮಹಿಳೆಗೂ ಸ್ವಂತ ಬದುಕು ರೂಪಿಸಿಕೊಳ್ಳಲು ಅವಕಾಶ ಬೇಡ್ವೇ!
ಎಲ್ಲರೂ ಮುಖವಾಡ ಧರಿಸಿಯೇ ಬದುಕುವವರು. ಸಮಾನತೆ, ಸಾಮಾಜಿಕತೆ, ಮೌಲ್ಯಗಳ ಬಗ್ಗೆ ಭಾಷಣ ಬಿಗಿಯುವವರೇ. ಸಂಸ್ಕೃತಿ ಕುರಿತಂತೂ ಮುತಾಲಿಕನಿಗಿಂತಲೂ ಉದ್ದುದ್ದದವರು ಸಂಘಟನೆಗಳನ್ನು ಮಾಡಿಕೊಂಡು, ತಮಗಿಷ್ಟ ಬಂದಂತೆ, ಇತರರನ್ನು ಶೋಷಿಸುತ್ತಿದ್ದಾರೆ. ಬಹುತೇಕ ಎಲ್ಲರ ಮನೆಗಳಲ್ಲಿಯೂ ತಂದೆ, ತಾಯಿ, ಅಜ್ಜ ಅಜ್ಜಿಯರಿಗೆ ತಮ್ಮ ಮನೆಯ ಮಕ್ಕಳಲ್ಲಿ ಹೆಣ್ಣು ಮಕ್ಕಳಿಗೆ ಮತ್ತು ಗಂಡು ಮಕ್ಕಳಿಗೆ, ಪ್ರೀತಿ, ವಾತ್ಸಲ್ಯ, ಸಂಸ್ಕೃತಿ, ಸಂಪ್ರದಾಯಗಳ ಹೆಸರಿನಲ್ಲಿ ಬಹಳ ತಾರತಮ್ಯ ಮಾಡುತ್ತಿದ್ದಾರೆ. ಎಲ್ಲ ಸಂಪ್ರದಾಯ, ಕಂದಾಚಾರ, ಮೂಢ ನಂಬಿಕೆಗಳು, ವೃತಗಳು ಎಲ್ಲವನ್ನೂ ಮಹಿಳೆಯರಿಗೆ ಮಾತ್ರ ವಹಿಸಿ, ಗಂಡಸರನ್ನು ಆರಾಮವಾಗಿ, ಸೋಮಾರಿ ಕಟ್ಟೆಗಳಲ್ಲಿ, ಹೋಟೆಲು, ಬಾರು, ಕ್ಲಬ್ಬು,..ಗಳಲ್ಲಿ ಕಾಳಕಳೆಯುವಂತೆ ಮಾಡಿದೆ ನಮ್ಮ ಸಂಸ್ಖೃತಿ!
- ಗಂಡು ಮಗನಿಗೆ ಎಲ್ಲಿಗೆ ಬೇಕಾದರೂ, ಎಷ್ಟು ಹೊತ್ತಿಗೆ ಬೇಕಾದರೂ, ಹೋಗಿ ಬರುವ ಸ್ವಾತಂತ್ಯ್ರ ಕೊಟ್ಟದ್ದಾರೆ. ಹೆಣ್ಣು ಮಕ್ಕಳಿಗೆ ಸುರಕ್ಷತೆ/ರಕ್ಷಣೆಯ ಹೆಸರಿನಲ್ಲಿ ಕಟ್ಟು ನಿಟ್ಟಾಗಿ ಮನೆಯಲ್ಲಿರುವಂತೆ ಮಾಡುತ್ತಾರೆ! ಹೀಗಾಗಿ ಗಂಡು ಹುಡುಗರು ಪೋಲಿ ಬಿದ್ದುಹೋಗುತ್ತಿದ್ದಾರೆ.
- ಅವನು ಗಹಗಹಿಸಿ ನಗಬೇಕು, ಇವಳು ಮರ್ಯಾದೆಯ ಹೆಸರಿನಲ್ಲಿ ತನ್ನಿಷ್ಟದಂತೆ ನಗಲೂ ಸ್ವಾತಂತ್ಯ್ರವಿಲ್ಲದೇ ಬದುಕಬೇಕು!
- ಮಗಳಿಗೆ ಹೊರಹೋಗುವಾಗ 'ಯಾರು ಏನು ಹೇಳಿದರೂ, ಸೀಟಿ ಹೊಡೆದರೂ, ನೀನು ಅದರ ಕಡೆ ಗಮನ ಕೊಡದೇ, ತಲೆ ಬಗ್ಗಿಸಿಕೊಂಡು ಬರಬೇಕು/ಹೋಗಬೇಕು' ಅಂತಾ ಬುದ್ಧಿ ಹೇಳುತ್ತಾರೆ. ಆದರೆ ಗಂಡು ಮಗನಿಗೆ 'ನೋಡಪ್ಪ, ಎಂದೂ ಹೆಣ್ಣು ಮಕ್ಕಳನ್ನು ಗೋಳು ಹುಯ್ದುಕೊಳ್ಳಬೇಡ, ಅವರನ್ನು ಕಾಡ ಬೇಡ, ಅವರನ್ನು ಗೌರವಿಸು' ಅಂತಾ ಯಾರಾದರೂ ಬುದ್ಧಿ ಹೇಳಿ ಹೊರಗೆ ಕಳಿಸ್ತಾರ?!
- ಗಂಡು ಮಗ ಎಷ್ಟು ಸಲ ಫೇಲಾದರೂ ಸರಿ, ಅವನಿಗೆ ಹೇಗಾದರೂ ಮಾಡಿ ಹಣ ಕೊಟ್ಟು ಮತ್ತೆ ಮತ್ತೆ ಪರೀಕ್ಷೆ ಕಟ್ಟಿಸ್ತಾರೆ, ಅವನ ಕಾಲ ಮೇಲೆ ಅವನು ನಿಲ್ಲಲಿ ಎಂದು ಸಾಲಮಾಡಿ, ಮನೆ ಆಸ್ತಿ ಎಲ್ಲ ಮಾರಿ ಬೇಕಾದರೂ ಬಂಡವಾಳ ಹಾಕಿ ಕೊಡ್ತಾರೆ. ಆದರೆ ಹೆಣ್ಣು ಮಗಳಿಗೆ ಎಷ್ಟು ಓದಿದರೂ ಕಂಡವರ ಮನೆ ಪಾತ್ರೆ ತೊಲೆಯೋದು ತಪ್ಪಲ್ಲ ಅಂತಾರೆ. ಮಗಳಿಗೆ ಒಂದು ಗಂಡು ನೋಡಿ ಮದುವೆಮಾಡಿ, ಗಂಡನ ಮನೆಗೆ ಕಳಿಸಿಬಿಟ್ಟರೆ ಅದೇ ಜನ್ಮ ಪಾವನ ಅಂತಾ ಮದುವೆ ಮಾಡಿ ಕಳಿಸಿ ಬಿಡ್ತಾರೆ.
- ಅವಳ ಗಂಡ ಎಂತಹ ನಾಲಾಯಕ್ಕಾದರೂ ಸರಿ ಅವಳಿಗೆ 'ಕೊಟ್ಟ ಹೆಣ್ಣು ಕುಲಕ್ಕೆ ಹೊರಗು' 'ಅತ್ತೆ ಮಾವನ ಸೇವೆ ಮಾಡಿ, ಗಂಡನನ್ನು ಸಹಿಸಿಕೊಂಡು, ತವರು ಮನೆ ಹೆಸರುಳಿಸು' ಅಂತಾ ಒಂದಷ್ಟು ಒಳ್ಳೆ ಗಾದೆ/ಹಾಡು/ಮಾತುಗಳನ್ನು ಹೇಳಿ, ತಲೆ ಸವರಿ, ಬಲಿಪಶುವಂತೆ ಮಾಡಿ, ಕೈ ಚೆಲ್ಲಿ ಕುಳಿತುಬಿಡ್ತಾರೆ.
- 'ಉದ್ಯೋಗಂ ಪುರುಷ ಲಕ್ಷಣಂ' ಅಂತಾ ಗಾದೆ ಮಾಡಿ, ಉದ್ಯೋಗ, ಹಣ, ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಗಂಡಸರಿಗೆ ಮಾತ್ರ ಮೀಸಲು ಮಾಡಿ, ಹೆಣ್ಣು ಮನೆಯೊಳಗೆ ಕೊಳೆಯುವಂತೆ, ದುಡಿಮೆಗೆ ತಕ್ಕ ಫಲದೊರೆಯದಂತೆ, ಮೂಲೆಗುಂಪಾಗುವಂತೆ ಮಾಡಿದರು.
- ಹೆಣ್ಣನ್ನು ಲಕ್ಷ್ಮೀ ಅಂತಾರೆ, ಆದರೆ ಕಾಸು ಮಾತ್ರ ಗಂಡಸರ ಕೈಯಲ್ಲಿಯೇ ಇರಬೇಕಂತೆ!
- ಸರಸ್ವತೀ ಅಂತಾರೆ, ಆದರೆ ತನ್ನಿಷ್ಟ ಬಂದಷ್ಟು ಓದಲು/ಕಲಿಯಲು ಮಾತ್ರ ಅವಕಾಶ ಕೊಡುವುದಿಲ್ಲ!
- ಮದುವೆ ಮಾಡಿ ಅವಳಿಗೆ ತಾಳಿಕಟ್ಟಿಸಿ, ಕಾಲುಂಗುರ ತೊಡಿಸಿ (ಬ್ಯಾಂಕಿನವರು ಸಾಲಕೊಟ್ಟ ಎಮ್ಮೆಗೆ ಕಿವಿಯಲ್ಲಿ ಮುರು ಹಾಕಿ ಇದು ನಮ್ಮದು ಅಂತಾ ಗುರುತು ಮಾಡ್ತಾರೆ ಹಾಗೆ) ಅವನಿಗೆ ಮಾತ್ರ ಏನೂ ಇಲ್ಲದೆ ಒಳ್ಳೆ ಹೋರಿಯ ಹಾಗೆ ಬಿಟ್ಟು ಬಿಡ್ತಾರೆ!
- '೧೦ ಪಂಚೆ ಬೇಕಾದರೆ ಒಟ್ಟಿರುತ್ತವೆ ಆದರೆ ೪ ಜಡೆ ಒಟ್ಟಿಗಿರಲ್ಲ' ಅಂತ ಗಾದೆ ಕಟ್ಟಿದರು, ಆದರೆ ಈಗ ಯಶಸ್ವಿಯಾಗಿ ಮಹಿಳಾ ಸ್ವ-ಸಹಾಯ ಸಂಘಗಳೇ ಕುಟುಂಬವನ್ನು, ಊರನ್ನು ಉದ್ಧಾರ ಮಾಡುತ್ತಿರುವುದು! ಈ ಸ್ವಸಹಾಯ ಸಂಘಗಳಲ್ಲಿ ಮಹಿಳೆಯರು ಉಳಿತಾಯ ಮಾಡದಿದ್ದಲ್ಲಿ ಇಷ್ಟು ಲಕ್ಷಗಟ್ಟಲೆ, ಕೋಟಿಗಟ್ಟಲೆ ಹಣ ಸಾರಾಯಿ ಅಂಗಡಿಯವರ ಪಾಲಾಗುತ್ತಿತ್ತು.
- ಮಹಿಳೆಯರನ್ನು ಸ್ವಸಹಾಯ ಸಂಘಗಳ ವಾರದ ಸಭೆಗೆ ಗಂಡಸರು ಕಳುಹಿಸುತ್ತಿರುವುದೇಕೆ ಗೊತ್ತೇ? ಅವಳು ಸಶಕ್ತಳಾಗಲಿ, ಪ್ರಪಂಚ ಜ್ಙಾನ ಬೆಳೆಯಲಿ ಅಂತಾ ಅಲ್ಲ, ಅವಳಿಂದ ಮನೆಯ ಗಂಡಸರಿಗೆ ಸುಲಭವಾಗಿ, ಸರಳವಾಗಿ, ಸುಲಭ ಕಂತುಗಳಲ್ಲಿ, ಮರ್ಯಾದೆಯಾಗಿ, ಬೇಕಾದಾಗ ಸಾಲ ಸಿಗುತ್ತದೆ ಅಂತಾ ಅಷ್ಟೇ!
- ಅವನು ಹೆಚ್ಚು ಹೆಣ್ಣು ಮಕ್ಕಳ ಜೊತೆ ಸಂಪರ್ಕ ಮಾಡಿದರೆ, ಅವನಿಗೆ ರೋಮಿಯೋ, ರವಿಚಂದ್ರ, ಗೌಡ, ರಾಜ, ಕೃಷ್ಣ, ಗಂಡಸು, ... ಎನ್ನುವ ಒಳ್ಳೆಯ ಪದಗಳಿಂದಲೇ ಸಂಭೋಧಿಸುತ್ತದೆ ಸಮಾಜ.
- ಕಟ್ಟಿಕೊಂಡ ಗಂಡ ದುಡಿಯದೇ, ಕುಡುಕನಾಗಿ, ಹೆಂಡತಿ ದುಡಿದಿದ್ದನ್ನೂ ಕುಡಿದು, ಮನೆ ಸಾಮಾನುಗಳನ್ನೂ ಮಾರಿಕೊಂಡು ಕುಡಿದು ಜೂಜಾಡಿ ಹಾಳು ಮಾಡಿದರೆ, ಮನೆಯ ಮಕ್ಕಳ ಜವಾಬ್ಧಾರಿ, ವಯಸ್ಶಾದವರ ಜವಾಬ್ಧಾರಿಯನ್ನು ಹೊತ್ತ ಹೆಂಡತಿ ಕೇವಲ ಕೂಲಿಯಿಂದ ಮನೆ ಸಾಗಿಸಲಾಗದೇ, ಇಷ್ಟವಿಲ್ಲದಿದ್ದರೂ ಇನ್ನೊಬ್ಬನಿಗೆ ಸುಖ ನೀಡಿ ಗಳಿಸಿದ ಹಣದಿಂದ ಕುಟುಂಬ ನಡೆಸುವ ಅನಿವಾರ್ಯ ಪರಿಸ್ಥಿತಿಯಲ್ಲಿ ಅದೆಷ್ಟೋ ಹೆಣ್ಣುಮಕ್ಕಳು ನರಳುತ್ತಿದ್ದಾರೆ.
ಹೆಣ್ಣುಗಂಡಿನ ಅಸಮಾನ ಅಧಿಕಾರ ಸಂಬಂಧಗಳ ಬಗ್ಗೆ, ದೇವದಾಸಿ ಪದ್ಧತಿ, ಲೈಂಗಿಕ ವೃತ್ತಿಗೆ ತಳ್ಳಲ್ಪಟ್ಟ ಮಹಿಳೆಯರ ಬಗ್ಗೆ ಮುತಾಲಿಕರಂತವರು, ಕಣ್ಣು ಮುಚ್ಚಿಕುಳಿತಿರೋದು ಯಾಕೆ?! ಒಂದು ಕಡೆ ಮಹಿಳೆಯರಿಗಾಗಿ, ಅವರ ಸಶಕ್ತತೆಗಾಗಿ, ಬಾಯಿಬಾಯಿ ಬಡಕೊಂಡು ಸ್ಕೀಮುಗಳನ್ನು ಹಾಕೋ ಸರ್ಕಾರ ಹಾಗೂ ಸ್ವಯಂಸೇವಾ ಸಂಸ್ಥೆಗಳು, ಮಹಿಳೆಯರ ಪರವಾದ ಧೋರಣೆಗ/ಪಾಲಿಸಿಗಳನ್ನು ಎಷ್ಟರ ಮಟ್ಟಿಗೆ ಜಾರಿಗೆ ತಂದಿವೆ?!
ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕೇವಲ ಪುರುಷರು ಮಾತ್ರ ಕಾರಣವಲ್ಲ ಮಹಿಳೆಯರೂ ಕಾರಣರಾಗಿದ್ದಾರೆ. ಹೆಣ್ಣು ಎಂದರೆ ತನಗೆ ತಗ್ಗಿ, ಬಗ್ಗಿ, ಕೂಲಿ ಪಡೆಯದ ಆಳಾಗಿರ ಬೇಕು ಎಂದು ಪುರುಷರು ಹೇಗೆ ನಿರೀಕ್ಷಿಸುತ್ತಿದ್ದಾರೆಯೋ, ಹಾಗೆಯೇ ಮಹಿಳೆಯರೂ ಸಹ ನನ್ನ ಅಜ್ಜಿ, ಅಮ್ಮ, ಅತ್ತೆ ಹೀಗಿದ್ದರು, ನಾನು ಹೀಗಿರುವೆ, ನನ್ನ ಮಗಳೂ, ಸೊಸೆಯೂ, ಮೊಮ್ಮಗಳೂ ಹೀಗಿಯೇ ನನ್ನಂತೆಯೇ ಕೋಣೆಯೊಳಗೇ ಪರುಷನ ಆಳಾಗಿ ಇರಬೇಕು ಎಂದು ಮಕ್ಕಳ ಮೇಲೆ ಹೇರುವ ಅರ್ಥವಿಲ್ಲದ ಕಟ್ಟಳೆಗಳೂ ಮಹಿಳೆಯ ಜೀವನವನ್ನು ದುರ್ಬಲಗೊಳಿಸಿ ಅಪಾಯಕ್ಕೀಡು ಮಾಡುತ್ತಿವೆ.ಹೆಣ್ಣಿಗೆ ಮದುವೆಯೊಂದೇ ಮೋಕ್ಷ ಎನ್ನುವ ಧೋರಣೆ ನಮ್ಮ ಸಮಾಜದಲ್ಲಿ ಅಳಿದುಹೋಗಿ, ಹೆಣ್ಣುಮಕ್ಕಳು ಸಹ ಅವರ ಕಾಲಮೇಲೆ ಅವರು ನಿಲ್ಲುವಂತೆ ಮಾಡಲು, ಅವರಿಗೂ ಆಯ್ಕೆಯ ಅಧಿಕಾರವನ್ನು ನೀಡಿ, ಅವರ ಜೀವನ ಅವರು ರೂಪಿಸಿಕೊಳ್ಳುವಂತೆ, ಗಂಡು ಮಕ್ಕಳಿಗೆ ಕೊಡುವಷ್ಠೇ ಪ್ರಾಮುಖ್ಯತೆಯನ್ನು ಹೆಣ್ಣು ಮಕ್ಕಳಿಗೆ ಕೊಡದಿದ್ದಲ್ಲಿ, ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯಕ್ಕೆ ಕೊನೆಯಿರುವುದಿಲ್ಲ.
ಹೌದು, ಕಾಲ ಬದಲಾಗುತ್ತಿದೆ, ಮಹಿಳೆಯೂ ಮನೆಯಿಂದ ಹೊರಬಂದು, ಕೈಗಾರಿಕೆಗಳಲ್ಲಿ ತೊಡಗುತ್ತಿದ್ದಾರೆ, ಉದ್ಯಾಮಿಗಳಾಗಿದ್ದಾರೆ, ಐಟಿಗಳಲ್ಲಿದ್ದು ಕೈತುಂಬಾ ಹಣಗಳಿಸುತ್ತಿದ್ದಾರೆ, ಎಲ್ಲ ಕ್ಷೇತ್ರಗಳಲ್ಲಿಯೂ ಪ್ರವೇಶಿಸಿ ಸಮರ್ಥವಾಗಿ ತಮ್ಮ ಕ್ಷೇತ್ರವನ್ನು ಬಲಪಡಿಸಿಕೊಳ್ಳುತ್ತಿದ್ದಾರೆ. ಆದರೆ, ಅವರ ಮೇಲಾಗುತ್ತಿರುವ ದೌರ್ಜನ್ಯಗಳು ನಿಂತಿಲ್ಲ! ಇದಕ್ಕೆಕಾರಣ ಈ ಬದಲಾವಣೆಯನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಲು ಇತರ ಮನಸ್ಸುಗಳು ಸಿದ್ಧಗೊಳ್ಳುತ್ತಿಲ್ಲ. ಬದಲಾವಣೆಯನ್ನು ಒಪ್ಪಿಕೊಳ್ಳುವ ಮನಸ್ಥಿತಿಯನ್ನು, ವಾತಾವರಣವನ್ನು ಸೃಷ್ಠಿಸಲು ಸಮರ್ಪಕ ಪ್ರಯತ್ನದ ಕೊರತೆ ಇದೆ. ಸರ್ಕಾರ, ಸ್ವಯಂಸೇವಾ ಸಂಸ್ಥೆಗಳು ಎಲ್ಲ ಯೋಜನೆಗಳಿಗೂ, ಕಾರ್ಯಕ್ರಮದ ಅನುಷ್ಠಾನಗಳಿಗೂ ಮಹಿಳೆಯರನ್ನೇ ಗುರಿಯಾಗಿಸಿವೆ. ಮಹಿಳೆ ಮನೆಯ ಒಳಗೆ ಹಾಗೂ ಹೊರಗೆ ಸಕ್ರಿಯವಾಗಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದಾಳೆ. ಇದು ಮಹಿಳೆಯ ಹೊರೆಯನ್ನು ಹೆಚ್ಚಿಸುತ್ತಿದೆ. ಪುರುಷರು ಆರಾಮವಾಗಿ, ದುರಭ್ಯಾಸಗಳ ದಾಸರಾಗಿ, ಡೋಲಾಯಮಾನ ಪರಿಸ್ಥಿತಿಗೆ ಹೋಗುತ್ತಿದ್ದಾರೆ. ಮಹಿಳೆಯರನ್ನು ಸಶಕ್ತಗೊಳಿಸುವ ಸಂದರ್ಭದಲ್ಲಿ ಪುರುಷರ ಕಡೆಗೂ ಗಮನ ಹರಿಸಿ ಕಾರ್ಯತಂತ್ರಗಳನ್ನು ರೂಪಿಸದಿದ್ದಲ್ಲಿ, ಸಮಾಜದ ಸ್ವಾಸ್ಥ್ಯ ಇನ್ನೂ ಹದಗೆಡುವ ಸಾಧ್ಯತೆ ಇದೆ.

ಗುರುವಾರ, ಮೇ 21, 2009
ಕನಸು ಟ್ರಸ್ಟ್ ಕುರಿತು ಜಸ್ಟ್ ಒಂದಿಷ್ಟು ಪರಿಚಯ ಅಷ್ಟೇ?
'ನನಗಾಗಿ' - ಈ ಬ್ಲಾಗ್ ಕ್ರಿಯೇಟ್ ಮಾಡಿದ್ದೀನಿ, ಆದರೆ ಏನು ಬರೀ ಬೇಕು, ಯಾಕೆ ಬರೀಬೇಕು, ಅನ್ನೋದೆಲ್ಲ ಅಷ್ಟೊಂದು ತಲೆ ಕೆಡಿಸ್ಕೊಂಡಿಲ್ಲ. ಆದ್ರೆ ಈಗ ಹೀಗೆ ಟೈಪ್ ಮಾಡ್ತಾ ಇದ್ರೆ ನನಗೇ ಗೊತ್ತಾಗ್ತಿದೆ, ನಾನು ಏನಾದ್ರೂ ಬರ್‍ಕೋ ಬಹುದು. ಬೇರೆಯವರು ಓದೋದಾದ್ರೆ ಓದ್ತಾರೆ. ಓದಿ ಇಷ್ಟವಾದ್ರೆ ಖುಷಿಪಡ್ತಾರೆ, ಇಲ್ಲಾಂದ್ರೆ ನೋಡಿ ಯೂಸ್ಲೆಸ್ ಅಂತಾ ಬಿಡ್ತಾರೆ. ಆದ್ರೆ ಇದೆಲ್ಲಾ ಕಲ್ತಿದ್ದು ಯಾರಿಂದಾ ಗೊತ್ತಾ, ಬೆಂಗಳೂರಿನ ನನ್ನ ಸ್ನೇಹಿತೆ ವೀಣಾಳಿಂದ. ಅವಳೊಬ್ಬ ಜರ್ನಲಿಸ್ಟ್ ಕಮ್ ಸೊಷಿಯಲ್ ವರ್ಕರ್‍ರು ವೆರಿ ಡೈನಾಮಿಕ್ಕು, ಆಕ್ಟಿವ್ವು, ಕಮಿಟೆಡ್ಡು. ಅವಳೊಂದು 'ಕನಸು ಟ್ರಸ್ಟ್' ಅಂತಾ ಮಾಡಿದ್ದಾಳೆ, ಅವಳ ಈ ಟ್ರಸ್ಟ್, ಕೊಳ್ಳೇಗಾಲ ಮತ್ತು ಚಾಮರಾಜನಗರದ ಸುತ್ತಮುತ್ತಲ ಕುಗ್ರಾಮಗಳಲ್ಲಿ ಹುಟ್ಟಿ ಬೆಳವಣಿಗೆ/ಅಭಿವೃದ್ಧಿಗಾಗಿ ಹಂಬಲಿಸುವ ಶಾಲೆ ಕಲಿಯುವ ಆಕಾಂಕ್ಷೆಯಿರುವ ಬಡ ಹೆಣ್ಣು ಮತ್ತು ಗಂಡು ಮಕ್ಕಳನ್ನು ಬೆಂಗಳೂರನಂತಹ ಊರುಗಳಿಗೆ ತಂದು, ಸ್ಕೂಲು/ಕಾಲೇಜು/ಹಾಸ್ಟೆಲ್ ಸೇರಿ ವಿದ್ಯಾಭ್ಯಾಸ ಮುಂದುವರೆಸಲು, ಅವರಿಗೆಲ್ಲ ಪಾರ್ಟ್‌ಟೈಂ ಕೆಲಸಗಳನ್ನು ಸ್ನೇಹಿತರ ಸಹಾಯದಿಂದ ಕೊಡಿಸಿದ್ದಾಳೆ. ತನ್ನ ಸ್ನೇಹಿತರಿಂದ ಟ್ರಸ್ಟಿಗೆ ದೇಣಿಗೆ ಪಡೆದು, ರಜಾದಿನಗಳಲ್ಲಿ ಹಾಸ್ಟೆಲ್ ನಲ್ಲಿ ಇರಲಾಗದ ಮಕ್ಕಳಿಗೆ, ಹಾಸ್ಟೆಲ್ ಇಲ್ಲದೇ ಕೆಲಸವಿಲ್ಲದೇ, ಊಟ/ಬಟ್ಟೆ ಇಲ್ಲದೇ ಇರುವ ಮಕ್ಕಳಿಗೆ, ಫೀಸು ಕಟ್ಟಲಾಗದ ಮಕ್ಕಳಿಗೆ ಸಹಾಯ ಮಾಡ್ತಾಳೆ. ಅವಳಿಗೆ ಇದನ್ನು ಒಂದು ಸೋಕಾಲ್ಡ್ ಎನ್.ಜಿ.ಓ ತರಹ ಮುಂದುವರೆಸುವ ಇಚ್ಚೆ ಇಲ್ಲ. ಈ ಟ್ರಸ್ಟ್ ನ್ನು ಡೊನೇಷನ್ ಪಡೆದು ತನ್ನ ಹೊಟ್ಟೆ ಪಾಡಿಗಾಗಿ ಅವಳು ಮಾಡಿಲ್ಲ, ಏನೋ ತನ್ನ ಕೈಯಲ್ಲಿ ಆದಷ್ಟು ಬಡ ಮಕ್ಕಳಿಗೆ ಸಹಾಯ ಮಾಡುವ ಮತ್ತು ತನ್ನ ಸ್ನೇಹಿತರಿಂದಲೂ ಮಾಡಿಸುವ ಪ್ರಾಮಾಣಿಕ ಉದ್ಧೇಶದಿಂದ ಮಾಡಿದ್ದಾಳೆ. ಸಹಾಯ ಮಾಡುವ ಇಚ್ಚೆ ಇರುವವರು ದಯವಿಟ್ಟು 'ಕನಸುಟ್ರಸ್ಟ್.ಬ್ಲಾಗ್ಸ್ಪಾಟ್.ಕಾಂ = www.kanasutrust.blospot.com' ಗೆ ಒಮ್ಮೆ ವಿಸಿಟ್ ಮಾಡಿನೋಡಿ.
ಆಲ್ ದಿ ಬೆಸ್ಟ್
ಆಲ್ ದಿ ಬೆಸ್ಟ್
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)