ಕರ್ನಾಟಕದಲ್ಲಿ, ಸಮಗ್ರ ಆಪ್ತಸಮಾಲೊಚನೆ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಸ್ವಪ್ರೇರಣೆಯಿಂದ ರಕ್ತ ಪರೀಕ್ಷೆ ಮಾಡಿಸಿಕೊಂಡವರಲ್ಲಿ ಸುಮಾರು ಇದುವರೆಗೆ ಒಟ್ಟು ೧.೫ ಲಕ್ಷ ಜನ ಎಚ್‌ಐವಿ ಪಾಸಿಟಿವ್ ಆಗಿದ್ದಾರೆ ಅವರಲ್ಲಿ ೭೦ ಸಾವಿರ ಜನ ಮಹಿಳೆಯರು ಸೇರಿದ್ದಾರೆ. ರಾಜ್ಯ ಸರ್ಕಾರದ ಅಂಕಿಸಂಖ್ಯೆಯ ಪ್ರಕಾರ ಆರು ವರ್ಷದ ಹಿಂದೆ ಶೇ೧.೫ ರಷ್ಟಿದ್ದ ಎಚ್‌ಐವಿ ಸೋಂಕಿನ ಪ್ರಮಾಣ ಇಂದು ೦.೩೮ ಕ್ಕೆ ಇಳಿದಿದೆ.
ರಾಷ್ಟ್ರ (ನ್ಯಾಕೋ - ನ್ಯಾಷನಲ್ ಏಡ್ಸ್ ನಿಯಂತ್ರಣ ಸಂಸ್ಥೆ ) ಹಾಗೂ ರಾಜ್ಯ ಸರ್ಕಾರ (ಕೆಸಾಪ್ಸ್- ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ) ಎಚ್‌ಐವಿ ನಿಯಂತ್ರಣ ಕಾರ್ಯಕ್ರಮವನ್ನು ಲೈಂಗಿಕ ವೃತ್ತಿನಿರತ ಮಹಿಳೆಯರು ಮತ್ತು ಪರುಷ ಸಲಿಂಗಕಾಮಿ ಗಂಡಸರ ಸಮುದಾಯಗಳನ್ನು ಗುರುತಿಸಿ ಅವರ ಸಂಘಟನೆಗಳ ಎಚ್‌ಐವಿ ತಡಗಟ್ಟುವ ಕಾರ್ಯಕ್ರಮವನ್ನು ಮುಂದುವರೆಸಲು ಪ್ರಯತ್ನಿಸುತ್ತಿದ್ದರೂ, ಇದಕ್ಕೆ ಪೂರಕವಾಗಿರ ಬೇಕಾದ ಪಾಲಿಸಿಗಳು/ನಿಯಮಗಳು ಸಮರ್ಪಕವಾಗಿಲ್ಲ.
ಕಾರ್ಯಕ್ರಮದ ಸುಸ್ಥಿರತೆಯು ಸಮುದಾಯದ ಸಶಕ್ತತೆಯಿಂದಲೇ ಸಾಧ್ಯ ಎನ್ನುವ ಸತ್ಯ ಗೊತ್ತಿದ್ದರೂ ಸಹ ಇಬ್ಬಂದಿ ಅಧಿಕಾರಿವರ್ಗದ ಕೆಸಾಪ್ಸ್ ನಂತಹ ಸಂಸ್ಥೆಗಳು, ಸಮುದಾಯ ಸಂಘಟನೆಗಳನ್ನು ಭಿಕ್ಷುಕರಂತೆ ಕಾಣುತ್ತಾ, ಒಡೆದು ಆಳುವ ನೀತಿಯನ್ನು ಸಮುದಾಯ ಸಂಸ್ಥಗಳಮೇಲೆ ಹೇರುತ್ತಾ, ಕೇವಲ ಅಂಕಿಸಂಖ್ಯೆಗಳ ಮೇಲೆ ಕಣ್ಣಿಟ್ಟು ಕೂತಿದೆ.
ಈಗ ಎನ್‌ಎಸಿಪಿ -೩ ಮುಗಿಯುತ್ತದೆ ಮುಂದಿನ ವರ್ಷದಿಂದ ಎನ್‌ಎಸಿಪಿ-೪ ಮುಂದುವರೆಯುತ್ತದೆ. ಇದಕ್ಕೆ ಬೇಕಾದ ಸಲಹೆಗಳನ್ನು ನ್ಯಾಕೋ ಹಾಗೂ ಕೆಸಾಪ್ಸ್ ಎರಡೂ ಸಂಸ್ಥೆಗಳು ತಳಮಟ್ಟದ ಅನುಭವಿ ಸಮುದಾಯ ಸಂಘಟನೆಗಳು ಹಾಗೂ ವ್ಯಕ್ತಿಗಳಿಂದ ಪಡೆದುಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸ ಬೇಕಿದೆ. ಕನಿಷ್ಠ ಒಂದಾದರೂ ಸಮಾಲೋಚನಾ ಸಭೆಯನ್ನು ರಾಜ್ಯ ಮಟ್ಟದಲ್ಲಿ ಏರ್ಪಡಿಸಲು ಪ್ರಯತ್ನಿಸಬೇಕಿದೆ. ಇದಕ್ಕೆ ನಾವೆಲ್ಲರೂ ಒತ್ತಡ ಹೇರಬೇಕಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ